ಬೆಳಗಾವಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖದೀಮರಿಗೆ ಸ್ಥಳೀಯರಿಂದ ಗೂಸಾ - Thieves trapped in Belgum
ಬೆಳಗಾವಿ: ಮನೆಗಳ್ಳತನ ಮಾಡುತ್ತಿದ್ದ ಖದೀಮರಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ದೇವಾಂಗ ನಗರದಲ್ಲಿ ನಡೆದಿದೆ. ನಗರದ ನೇಕಾರರ ಮನೆಗಳ್ಳತನ ಮಾಡಿ ಮಗ್ಗದ ದಾರ ನಾಶ ಮಾಡಲು ಖದೀಮರು ಯತ್ನಿಸುತ್ತಿದ್ದರು ಎನ್ನಲಾಗಿದ್ದು, ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ನೋಡಿದ ಸ್ಥಳೀಯರು ಖದೀಮರನ್ನು ಪತ್ತೆ ಹಚ್ಚಿ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಆರೋಪಿಗಳಾದ ಅಮಿತ್ ಹರ್ನಿ, ಬಾಬು ದಿವಟಿಗೆ ಸಿಕ್ಕಿಬಿದ್ದ ಖದೀಮರು ಎನ್ನಲಾಗಿದೆ.