ಮನೆಗೆ ಖನ್ನ ಹಾಕಿದ ಖದೀಮರು: ಲಕ್ಷಾಂತರ ರೂ. ಚಿನ್ನಾಭರಣ ದೋಚಿ ಪರಾರಿ - 30ಕ್ಕೂ ಅಧಿಕ ತೊಲೆ ಚಿನ್ನಾಭರಣ, ಬೆಳ್ಳಿ
ರಾಯಚೂರು: ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ, ಜಿಲ್ಲೆಯ ಲಿಂಗಸುಗೂರಿನ ವಿವೇಕಾನಂದ ನಗರದ ಶೇಖ ಮಹೆಬೂಬ್ ಸಾಹೇಬ್(ಸೌದಿ) ಅವರ ಮನೆಯಲ್ಲಿ ನಡೆದಿದೆ. 30ಕ್ಕೂ ಅಧಿಕ ತೊಲೆ ಚಿನ್ನಾಭರಣ, ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ದೇವರನ್ನ ನೋಡಲು ಮನೆಯವರು ತೆರಳಿದ್ದರು. ಈ ವೇಳೆ, ಮನೆಯ ಬೀಗ ಮುರಿದು ಒಳಗೆ ನುಗ್ಗಿ ಚಿನ್ನಾಭರಣ, ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದ್ದಾರೆ.