ಬ್ಯಾಂಕ್ ಹಾಗೂ ಕೈಗಾರಿಕೆಗಳ ನಡುವೆ ನೇರ ಸಂಬಂಧ ಬೇಕು: ಕಾಸಿಯಾ ಅಧ್ಯಕ್ಷ ರಾಜು - ಬ್ಯಾಂಕ್ ಹಾಗೂ ಉದ್ಯಮಿ
ಬೆಂಗಳೂರು: ದೇಶದಲ್ಲಿ ಬದಲಾಗುತ್ತಿರುವ ಆರ್ಥಿಕ ಸ್ಥಿತಿಯಲ್ಲಿ ಖಾಸಗಿ ಕ್ರೆಡಿಟ್ ಏಜೆನ್ಸಿ ಪಾತ್ರ ಬೇಡ. ನೇರವಾಗಿ ಕೈಗಾರಿಕೆಗಳಿಗೆ ಬೇಕಾದ ಸಾಲವನ್ನು ಬ್ಯಾಂಕ್ ಮೂಲಕ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡುತ್ತಿದ್ದಾರೆ. 2016ರಿಂದ ಬ್ಯಾಂಕ್ ಸಾಲ ವಿನಿಯೋಗ ವ್ಯವಸ್ಥೆಯನ್ನು ಕೇಂದ್ರೀಕೃತ ಮಾಡಲಾಯಿತು. ಅಂದಿನಿಂದ ಬ್ಯಾಂಕ್ ಹಾಗೂ ಉದ್ಯಮಿಗಳ ಸಂಬಂಧ ದೂರವಾಗುತ್ತಿದೆ ಎಂದು ಕಾಸಿಯಾ ಸಂಘದ ಅಧ್ಯಕ್ಷ ರಾಜು ಹೇಳಿದರು. ಈಟಿವಿ ಭರತ್ ಜೊತೆ ಮಾತನಾಡಿದ ಅವರು, ಬ್ಯಾಂಕ್ ಸಾಲದ ಬಗ್ಗೆ ಹಾಗೂ ಖಾಸಗಿ ಕ್ರೆಡಿಟ್ ಸಂಘದ ಬಗ್ಗೆ ವಿವರಿಸಿದ್ದಾರೆ.