ಕೇಂದ್ರ ಸರ್ಕಾರದ ಬಜೆಟ್ ಶೂನ್ಯ ಬಜೆಟ್: ಹರಿಹರ ಶಾಸಕ ಎಸ್.ರಾಮಪ್ಪ - ಹರಿಹರ ಶಾಸಕ ಎಸ್.ರಾಮಪ್ಪ ಹೇಳಿಕೆ
ದಾವಣಗೆರೆ: ಕೇಂದ್ರ ಸರ್ಕಾರದ ಬಜೆಟ್ ಶೂನ್ಯ ಬಜೆಟ್, ರೈತರು, ಯುವಕರನ್ನು ಮರೆತಿರುವ ಬಜೆಟ್ ಎಂದು ಹರಿಹರ ಶಾಸಕ ಎಸ್.ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಷೋಷಣೆ ಮಾಡಿದ್ದ 20 ಲಕ್ಷ ಕೋಟಿ ಎಲ್ಲಿ ಹೋಯ್ತು, ಬಂಡವಾಳಶಾಹಿಗಳಿಗೆ ಅಷ್ಟೇ ಈ ಬಜೆಟ್ ಅನುಕೂಲವಾಗಿದ್ದು, ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್, ಡಿಸೇಲ್ ಜೊತೆಗೆ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಇಂಧನ ಬೆಲೆ ಕಡಿಮೆ ಮಾಡುವ ಬದಲು ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಹಲವು ಸೌಲತ್ತು ಇತ್ತು, ಆದರೆ, ಈಗ ಅದಾವುದು ಇಲ್ಲ. ಸರ್ಕಾರದ ಕೆಟ್ಟ ಆಡಳಿತವನ್ನು ಜನರು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.