ಹಾಸನದಲ್ಲಿ ಸಾಮಾಜಿಕ ಅಂತರ ಅಂದ್ರೇನು ಎಂದು ಜನಕ್ಕೆ ಗೊತ್ತಿಲ್ವೇ? ಇಲ್ನೋಡಿ.. - ಹಾಸನ ಪೊಲೀಸ್
ನಗರದಲ್ಲಿ ಮತ್ತೆ ಜನ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ನಗರದ ಸಿಟಿ ಬಸ್ ನಿಲ್ದಾಣದಲ್ಲಿ ವಾರದ 3 ದಿನ ಸಂತೆ ನಡೆಯುತ್ತಿದೆ. ಗುಂಪು ಗುಂಪಾಗಿ ತರಕಾರಿ ಹೂ-ಹಣ್ಣು ಖರೀದಿ ಮಾಡಲು ಜನ ಮುಗಿಬಿದಿದ್ದಾರೆ. ಎಷ್ಟೇ ಅರಿವು ಮೂಡಿಸಿದ್ರೂ ಯಾವುದಕ್ಕೂ ಡೋಂಟ್‌ಕೇರ್ ಎನ್ನದ ಜನ ಗ್ರೀನ್ ಝೋನ್ ಜಿಲ್ಲೆ ಎಂಬ ನೆಪದಿಂದ ಬೇಕಾಬಿಟ್ಟಿ ಸುತ್ತಾಡುತ್ತಿದ್ದಾರೆ. ಕೆಲ ನಿಯಮ ಸಡಿಲಿಕೆಯಾದರೂ ಭಾರಿ ಪ್ರಮಾಣದಲ್ಲಿ ವಾಹನ ಓಡಾಟವಾಗುತ್ತಿದೆ. ವಾಹನಗಳಿಗೆ ಪೊಲೀಸ್ ಇಲಾಖೆ ಬ್ರೇಕ್ ಹಾಕಬೇಕಿದೆ..