ಇಂದು ಭಾರತ್ ಬಂದ್ಗೆ ಕರೆ... ಕೊಪ್ಪಳದಲ್ಲಿ ಜನಜೀವನ ಯಥಾಸ್ಥಿತಿ - ಕೊಪ್ಪಳ ಲೆಟೆಸ್ಟ್ ನ್ಯೂಸ್
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾನಾ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ ಬಿಸಿ ಕೊಪ್ಪಳಕ್ಕೆ ತಟ್ಟಿಲ್ಲ. ಬೆಳಗ್ಗೆಯಿಂದಲೇ ಎಂದಿನಂತೆ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗೆ ಇಳಿದಿವೆ. ಅಂಗಡಿಗಳು ಮುಂಗಟ್ಟುಗಳು ತೆರೆದಿವೆ. ಸಾರ್ವಜನಿಕರು ಯಥಾ ಪ್ರಕಾರ ಬಸ್ಗಳ ಮೂಲಕ ಪ್ರಯಾಣಕ್ಕಾಗಿ ಬಸ್ ನಿಲ್ದಾಣಗಳಿಗೆ ನಿರಾತಂಕವಾಗಿ ಬರುತ್ತಿದ್ದಾರೆ. ಶಾಲಾ ಕಾಲೇಜ್ಗಳು ಎಂದಿನಂತೆ ಪ್ರಾರಂಭವಾಗಲಿವೆ. ಕಾರ್ಮಿಕ ಸಂಘಟನೆಗಳು 10 ಗಂಟೆಯ ನಂತರ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...