ಸದ್ಯಕ್ಕೆ ಶಾಲೆಗಳ ಪುನಾರಂಭ ಬೇಡ: ಶಾಸಕ ಅಪ್ಪಚ್ಚು ರಂಜನ್ ಅಭಿಮತ - ಕೊಡಗು ಅಪ್ಡೇಟ್
ಕೊಡಗು: ಶಾಲೆಗಳು ಆರಂಭವಾದರೆ ಕೊರೊನಾ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಹಾಗಾಗಿ ಸದ್ಯಕ್ಕೆ ಶಾಲೆ ಆರಂಭಿಸುವುದು ಬೇಡ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಶಾಲೆಗಳು ಪ್ರಾರಂಭವಾದರೆ ಮಕ್ಕಳಿಂದಲೇ ಕೊರೊನಾ ಹೆಚ್ಚಾಗಿ ಹರಡಬಹುದು. ಕೊರೊನಾ ಹಾವಳಿ ಕಡಿಮೆ ಆಗುವವರೆಗೆ ಶಾಲೆ ಆರಂಭಿಸುವುದು ಬೇಡ. ಆರಂಭದಲ್ಲಿ ಒಂದೋ ಎರಡೋ ಕೊರೊನಾ ಪ್ರಕರಣಗಳು ಬರುತ್ತಿದ್ದವು. ಈಗ ಜಿಲ್ಲೆಯಲ್ಲಿ ಪ್ರತಿನಿತ್ಯ 100 ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸದ್ಯಕ್ಕೆ ಶಾಲೆ ಆರಂಭಿಸದಂತೆ ಸಚಿವರಿಗೂ ಒತ್ತಾಯಿಸುತ್ತೇನೆ ಎಂದರು.