ರಾಜ್ಯಪಾಲರಿಗೆ ಪತ್ರ ಬರೆದರೆಂದು ಸರ್ಕಾರ ವಜಾ ಮಾಡಬೇಕೆಂಬ ಕಾನೂನೇನಿಲ್ಲ : ಸಚಿವ ಶ್ರೀರಾಮುಲು - Minister Sriramulu
ರಾಯಚೂರು : ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಮಾತ್ರಕ್ಕೆ ಸರ್ಕಾರ ವಜಾ ಮಾಡಬೇಕು ಅನ್ನೋ ಕಾನೂನೇನೂ ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ರಾಜ್ಯಪಾಲರ ಆಡಳಿತ ಹೇರಿಕೆ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಪತ್ರ ಬರೆದ ಮಾತ್ರಕ್ಕೆ ಸರ್ಕಾರ ವಜಾ ಮಾಡಬೇಕೆಂದಿಲ್ಲ. ನಮ್ಮ ಕಾನೂನಿನಲ್ಲಿ ಪತ್ರ ಬರೆದ ಕೂಡಲೇ ವಜಾ ಮಾಡಬೇಕು ಅಂತಾ ಇಲ್ಲ. ಸಿದ್ದರಾಮಯ್ಯನವರ ಕಾನೂನಿನಲ್ಲಿ ಇರಬೇಕು ಎಂದರು.