ಹಾವೇರಿ ಲಾಕ್ಡೌನ್: ಅಗತ್ಯ ವಸ್ತುಗಳ ದರದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ - ಹಾವೇರಿ ಲಾಕ್ಡೌನ್ ಲೆಟೆಸ್ಟ್ ನ್ಯೂಸ್
ಲಾಕ್ಡೌನ್ ಬಳಿಕ ಹಾವೇರಿಯಲ್ಲಿ ತರಕಾರಿ ಮತ್ತು ಹಾಲಿನ ದರದಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸವಾಗಿಲ್ಲ. ತರಕಾರಿ ಬೆಲೆ ಮೊದಲಿಗಿಂತಲೂ ಸ್ವಲ್ಪ ಕಡಿಮೆ ಆಗಿದೆ. ಮೊದಲು ದಲ್ಲಾಳಿಗಳ ಮೂಲಕ ವ್ಯಾಪಾರಸ್ಥರು ತರಕಾರಿ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದರು. ಆದ್ರೀಗ ಹೆಚ್ಚಾಗಿ ತರಕಾರಿಯನ್ನು ನೇರವಾಗಿ ರೈತರೇ ಮಾರಾಟ ಮಾಡ್ತಿದ್ದು, ಜಿಲ್ಲಾಡಳಿತದ ನಿರ್ದೇಶನದಂತೆ ಬೆಳಿಗ್ಗೆ ಆರು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ತರಕಾರಿ ಮಾರಾಟ ಆಗುತ್ತದೆ.