ರಾಮುಲು ಬಂದು ಹೋದ್ರೂ ಬದಲಾಗದ ಕೊಡಗು ಜಿಲ್ಲಾಸ್ಪತ್ರೆ ಪರಿಸ್ಥಿತಿ - ಕೊಡಗು ವೈದ್ಯರಿಗಾಗಿ ಪ್ರತಿಭಟನೆ
ಆರೋಗ್ಯ ಮಂತ್ರಿಗಳು ರಾಜ್ಯಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಿದ್ದ ಪರಿ ನೋಡಿದ್ರೆ ವೈದ್ಯಕೀಯ ಸಮಸ್ಯೆ ದೂರವಾಗುತ್ತೆ ಅನ್ನೋ ಭರವಸೆ ಜನ್ರಲ್ಲಿ ಮೂಡಿತ್ತು. ಆದರೀಗ ಆರೋಗ್ಯ ಸಚಿವರು ಬಂದು ಹೋದರೂ ಸಮಸ್ಯೆಗಳು ಹಾಗೆ ಉಳಿದಿದ್ದು, ಸರಿಯಾದ ಚಿಕಿತ್ಸೆ ಸಿಗದೇ ಮಂಜಿನ ನಗರಿ ಜನರು ಬೀದಿಗಿಳಿದು ಪ್ರತಿಭಟಿಸುವ ಸ್ಥಿತಿ ನಿರ್ಮಾಣವಾಗಿದೆ.