ಕರ್ನಾಟಕ

karnataka

ETV Bharat / videos

ನಿಡಗುಂದಿ ಮುದ್ದೇಶ್ವರ ದೇವಸ್ಥಾನದ ಹುಂಡಿಗೆ ಕನ್ನ: ಜಾತ್ರೆಗೆ ಮುನ್ನವೇ ಹಣ ಕದ್ದೊಯ್ದ ಖದೀಮರು - ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣ

By

Published : Feb 10, 2020, 10:32 AM IST

ವಿಜಯಪುರ: ದೇವಸ್ಥಾನದಲ್ಲಿನ ಹುಂಡಿ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ನಿಡಗುಂದಿಯಲ್ಲಿರುವ ಶ್ರೀ ಮುದ್ದೇಶ್ವರ ದೇವಸ್ಥಾನದ ಹುಂಡಿಯಲ್ಲಿನ ಹಣ ಕಳ್ಳತನವಾಗಿದೆ. ಪ್ರತಿವರ್ಷ ಮಾರ್ಚ್​ನಲ್ಲಿ ಜಾತ್ರೆ ನಡೆಯುತ್ತಿದ್ದು, ಜಾತ್ರೆವೇಳೆ ಹುಂಡಿಯ ಹಣ ತೆಗೆಯಲಾಗುತ್ತಿತ್ತು.‌ ಆದ್ರೆ ಜಾತ್ರೆ ಮುನ್ನವೇ ಖದೀಮರು ಕೈಚಳಕ ತೋರಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನಿಡಗುಂದಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details