ಕರ್ನಾಟಕ

karnataka

ETV Bharat / videos

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರ ಕೈಚಳಕ: ನಗದು, ಚಿನ್ನಾಭರಣ ದೋಚಿ ಪರಾರಿ - ನೆಲಮಂಗಲದಲ್ಲಿ ಕಳ್ಳತನ ಲೇಟೆಸ್ಟ್​​ ಸುದ್ದಿ

By

Published : Oct 26, 2019, 12:57 PM IST

ನೆಲಮಂಗಲ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಹಣ, ಒಡವೆ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲದ ಸುಭಾಷ್ ನಗರದ ಸೂಯಲ್ ಕೂರಷೇ ಎಂಬುವರ ಮನೆಯಲ್ಲಿ ನಡೆದಿದೆ. ಸೂಯಲ್ ಕುಟುಂಬದವರೆಲ್ಲರೂ ಕಳೆದ ರಾತ್ರಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಸಮಯ ಸಾಧಿಸಿದ ಕಳ್ಳರು, ಮನೆಯೊಳಗೆ ನುಗ್ಗಿ ಲಾಕರ್​ನಲ್ಲಿದ್ದ 2 ಲಕ್ಷದ 7 ಸಾವಿರ ನಗದು ಹಣ ಮತ್ತು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸಿಬ್ಬಂದಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details