ಕರ್ನಾಟಕ

karnataka

ETV Bharat / videos

ಮೊಬೈಲ್​​​​​​​ ಅಂಗಡಿಯಲ್ಲಿ ಕೈಚಳಕ ತೋರಿಸಿದ ಖದೀಮರು - ಹುಬ್ಬಳ್ಳಿ ಮೊಬೈಲ್​ ಅಂಗಡಿಯಲ್ಲಿ ಕಳ್ಳತನ ಸುದ್ದಿ

By

Published : Nov 19, 2019, 4:50 PM IST

ಹುಬ್ಬಳ್ಳಿ: ನಗರದ ಗದಗ ರೋಡ್​ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಅಂಗಡಿ‌ ಮೇಲಿನ ತಗಡನ್ನು ತೆಗೆದು ಒಳ ನುಗ್ಗಿರುವ ಕಳ್ಳರು ವಿವಿಧ ಕಂಪನಿಯ‌ ಮೊಬೈಲ್ ಹಾಗೂ ನಗದು‌ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಂಗಡಿಯು ಉದಯ ಕಲಬುರ್ಗಿ ಅವರಿಗೆ ಸೇರಿದಾಗಿದ್ದು, 5 ಜಿಯೋ ಮೊಬೈಲ್, 1 ರೆಡ್​ಮಿ ಮೊಬೈಲ್, ಇಪ್ಪತ್ತು ಸಾವಿರ ಮೌಲ್ಯದ ಮೊಬೈಲ್ ಐಟೆಮ್ಸ್ ಮತ್ತು ಐದು ಸಾವಿರ ಹಣ ಕಳ್ಳತನವಾಗಿವೆ. ಇನ್ನು ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details