ಹಾಡಹಗಲೇ ಮುತ್ತೂಟ್ ಫೈನಾನ್ಸ್ ದರೋಡೆ: ಸಿಬ್ಬಂದಿ ಕಟ್ಟಿಹಾಕಿ 7 ಕೋಟಿ ನಗದು, ಚಿನ್ನಾಭರಣ ಲೂಟಿ! - hosuru Muthoot Finance
ಆನೇಕಲ್/ಹೊಸೂರು: ಹಾಡಹಗಲೇ ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆ ನಡೆದಿದ್ದು, 7 ಕೋಟಿ ರೂ. ನಗದು ಹಾಗು ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಿನ್ನೆ ಬೆಳಗ್ಗೆ ಸುಮಾರು 9 ಗಂಟೆಗೆ ಹೊಸೂರಿನ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್, ಮ್ಯಾನೇಜರ್ ಹಾಗು ಸಿಬ್ಬಂದಿಯನ್ನು ಕಟ್ಟಿಹಾಕಿ ನಗದು ಮತ್ತು ಚಿನ್ನ ದೋಚಿ ಪರಾರಾಗಿದ್ದಾರೆ. 6 ಮಂದಿ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ದರೋಡೆಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ. ಅಲ್ಲದೇ ಮುತ್ತೂಟ್ ಫೈನಾನ್ಸ್ನ ಓರ್ವ ಮ್ಯಾನೇಜರ್ ಅವರ ಫೋನ್ ಆನೇಕಲ್ ಭಾಗದ ಭಕ್ತಿಪುರದಲ್ಲಿ ಸಿಕ್ಕಿದ್ದು, ದರೋಡೆಕೋರರು ಭಕ್ತಿಪುರದ ಬಳಿ ಮೊಬೈಲ್ ಮತ್ತು ಕೆಲ ಖಾಲಿ ಬ್ಯಾಗ್ ಎಸೆದು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಮ್ಯಾನೇಜರ್ನ ಜಿಪಿಎಸ್ ಲೊಕೇಷನ್ ಪತ್ತೆ ಮಾಡಿದಾಗ ಭಕ್ತಿಪುರದ ಕಡೆ ಲೊಕೇಷನ್ ಸಿಕ್ಕಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ, ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.