ಕೇರಳ ಮಾದರಿಯಲ್ಲಿ ನೇಕಾರರಿಗೆ ಪರಿಹಾರ ನೀಡಿ: ರಂಗಕರ್ಮಿ ಪ್ರಸನ್ನ - COVID 19 relief fund
ಬೆಂಗಳೂರು: ನೇಕಾರರರಿಗೆ ಸಿಗುತ್ತಿರುವ ಕೂಲಿಯ ಜೊತೆಗೆ ನರೇಗಾ ಕೂಲಿಯನ್ನು ರಾಜ್ಯ ಸರ್ಕಾರ ಕೊಡಬೇಕು ಹಾಗೂ ಆ ಕೂಲಿ ಕೇಂದ್ರ ಸರ್ಕಾರದಿಂದ ಬರುವಂತೆ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಬೇಕು ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ನೇಕಾರರ ಕರೊನಾ ಸಂಕಷ್ಟಕ್ಕೆ ಸ್ಪಂದಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ಕೇರಳ ಸರ್ಕಾರದ ಮಾದರಿಯಲ್ಲಿ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.