ಜಾಗತೀಕರಣದ ಅಲೆಯೊಳಗೆ ಕೊಚ್ಚಿಹೋಯ್ತು ರಂಗಭೂಮಿ ಕಲೆ... ಕಲಾವಿದರು ಬೀದಿಪಾಲು - ಬೀದರ್ ನಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರಭಾವಕ್ಕೆ ದಿವಾಳಿಯಾದ ನಾಟಕ ಕಂಪನಿಗಳು.
ಒಂದು ಕಾಲದಲ್ಲಿ ಮುಖಕ್ಕೆ ಬಣ್ಣ ಹಾಕಿ ವೇದಿಕೆ ಮೇಲೆ ಖಡಕ್ ಡೈಲಾಗ್ ಹೇಳಿದ್ರೆ ಸಾಕಿತ್ತು. ವೇದಿಕೆ ಮುಂದಿದ್ದ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಮಾಡಿ, ಮನರಂಜನೆ ನೀಡ್ತಿದ್ದ ರಂಗಭೂಮಿಯ ಜೀವಂತ ಕಲೆಯಾದ ನಾಟಕ ಇವತ್ತು ದಿವಾಳಿ ಅಂಚಿಗೆ ಬಂದಿದೆ. ಆದಾಯವಿಲ್ಲದ ನಾಟಕ ಕಂಪನಿ ಬಾಗಿಲು ಮುಚ್ಚಿಕೊಂಡು ಕಲಾವಿದರು ಬೀದಿಯಲ್ಲಿ ನಾಟಕ ಪ್ರದರ್ಶನ ಮಾಡಿ ಬದುಕುವಂತಹ ದುರಂತ ಸ್ಥಿತಿ ಎದುರಾಗಿದೆ.