ಸುರಂಗದಲ್ಲಿ ಸಿಲುಕಿಕೊಂಡ ಯುವಕ: 2 ಗಂಟೆ ಅಲ್ಲೇ ಇದ್ದ ಆತನನ್ನ ರಕ್ಷಿಸಿದ್ದು ಹೇಗೆ? ವಿಡಿಯೋ - ಮುಧೋಳ ತಾಲೂಕಿನ ನಾಗರಾಳ ಗ್ರಾಮ
ಬೆಳಗಾವಿ: ಈಜಲು ಹೋಗಿದ್ದ ಯುವಕನೊಬ್ಬ ಎರಡು ಗಂಟೆಗೂ ಹೆಚ್ಚು ಕಾಲ ಕಾಲುವೆ ಸುರಂಗದಲ್ಲಿ ಸಿಲುಕಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ಪಟ್ಟಣದ ಯಲ್ಲಮ್ಮನ ಗುಡ್ಡ ಸಮೀಪದ ಮಲಪ್ರಭ ಬಲದಂಡೆ ಕಾಲುವೆಯ ಸುರಂಗದಲ್ಲಿ ಯುವಕನೊಬ್ಬ ಸಿಲುಕಿಕೊಂಡಿದ್ದನು. ಮುಧೋಳ ತಾಲೂಕಿನ ನಾಗರಾಳ ಗ್ರಾಮದ ವಿಠ್ಠಲ್ ಹೊಸಗೌಡರ ಸುರಂಗದಲ್ಲಿ ಸಿಲುಕಾಕಿಕೊಂಡ ಯುವಕ. ಯಲ್ಲಮ್ಮನ ಜಾತ್ರೆಗೆ ಆಗಮಿಸಿದ್ದ ವಿಠ್ಠಲ್, ಸ್ನೇಹಿತರ ಜತೆ ಈಜಲು ಕಾಲುವೆಗೆ ಹೋಗಿದ್ದನು. ಕಾಲುವೆಯ ನೀರಿನ ರಭಸಕ್ಕೆ ವಿಠ್ಠಲ್ ಕಾಲುವೆ ಸುರಂಗ ಮಾರ್ಗದೊಳಗೆ ಹೋಗಿ ಕಬ್ಬಿಣದ ಸಲಾಕೆ ಹಿಡಿದು 2 ಗಂಟೆಗೂ ಹೆಚ್ಚು ಕಾಲ ಅಲ್ಲೇ ಉಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿಠ್ಠಲ್ನನ್ನು ರಕ್ಷಿಸಿದ್ದಾರೆ.