ಜಿಂದಾಲ್ ಕಾರ್ಖಾನೆಗೆ ಕೆಲಸಕ್ಕೆ ಹೋದ್ರೆ ಗ್ರಾಮಗಳಿಗೆ ನೋ ಎಂಟ್ರಿ... ಡಂಗೂರ ಸಾರಿದ ಊರ ಜನ - not going to the Jindal factory
ಬಳ್ಳಾರಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗಣಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯ ಕೆಲಸಕ್ಕೆ ಯಾರೊಬ್ಬರೂ ಹೋಗಬಾರದೆಂದು ನಾನಾ ಗ್ರಾಮಗಳ ಗ್ರಾಮಸ್ಥರು ಡಂಗೂರ ಹೊಡೆಸಿ ಎಚ್ಚರಿಕೆ ನೀಡಿದ್ದಾರೆ. ಜಿಂದಾಲ್ ಉಕ್ಕಿನ ಕಾರ್ಖಾನೆಗೆ ಕೆಲಸಕ್ಕೆ ಹೋಗುವ ಯಾರೊಬ್ಬರೂ ಗ್ರಾಮಗಳನ್ನು ಪ್ರವೇಶಿಸುವಂತಿಲ್ಲ ಎಂಬ ಸಂದೇಶವನ್ನುಡಂಗೂರ ಸಾರಿದ್ದಾರೆ.