ಬಸ್ಗಾಗಿ ಕಾಲೇಜು ವಿದ್ಯಾರ್ಥಿಗಳ ಪರದಾಟ: ಪ್ರಾಣ ಪಣಕ್ಕಿಟ್ಟು ಪ್ರಯಾಣ! - ಸರ್ಕಾರಿ ಪ್ರಥಮದರ್ಜೆ ಕಾಲೇಜು
ಹಾವೇರಿ: ನಗರದಲ್ಲಿರುವ ಏಕೈಕ ಸರ್ಕಾರಿ ಪ್ರಥಮದರ್ಜೆ ಕಾಲೇಜು, ನಗರದಿಂದ 5 ಕಿ ಮೀ ದೂರದಲ್ಲಿದೆ. ಇಲ್ಲಿಗೆ ಪ್ರತಿನಿತ್ಯ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಆಗಮಿಸುತ್ತಾರೆ. ಆದರೆ ನಗರದಿಂದ ಕಾಲೇಜ್‌ಗೆ ತೆರಳಲು ಸರಿಯಾದ ಬಸ್ ಸೌಕರ್ಯವಿಲ್ಲಾ. ಇದರ ಪರಿಣಾಮ ವಿದ್ಯಾರ್ಥಿಗಳು ಬಸ್‌ನ ಬಾಗಿಲನಲ್ಲೇ ನಿಂತುಕೊಂಡು ಪಯಣಿಸುವ ಅನಿವಾರ್ಯತೆ ಎದುರಾಗಿದೆ. ಕಾಲೇಜ್‌ಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾವೇರಿಯಿಂದ 5 ಕಿ.ಮೀ. ದೂರದಲ್ಲಿದೆ. ಹಾವೇರಿಯಿಂದ ಗುತ್ತಲಕ್ಕೆ ತೆರಳುವ ಮಾರ್ಗದಲ್ಲಿ ಕಾಲೇಜು ಇದೆ. ಈ ಕಾಲೇಜ್‌ಗೆ ಪ್ರತಿನಿತ್ಯ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಆಗಮಿಸುತ್ತಾರೆ. ಬಸ್ ಸೌಕರ್ಯವಿಲ್ಲದೇ ಪ್ರಾಣ ಪಣಕ್ಕಿಟ್ಟು ಪ್ರಯಾಣಿಸುತ್ತಾರೆ.