ಉಪಚುನಾವಣೆಗೆ ತಡೆ: ಸುಪ್ರೀಂ ತೀರ್ಪು ಸ್ವಾಗತಿಸಿದ ಬಿ.ಸಿ. ಪಾಟೀಲ್ - latest haveri news
ಸುಪ್ರೀಂಕೋರ್ಟ್ ಉಪಚುನಾವಣೆಗೆ ತಡೆ ನೀಡಿರೋದು ಸ್ವಾಗತಾರ್ಹ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ನಿರ್ಧಾರದ ವಿರುದ್ಧ ಕೋರ್ಟ್ಗೆ ಹೋಗಿದ್ದು, ನಾವು ತಡೆಯಾಜ್ಞೆ ಕೋರಿದ್ದೆವು. ಇದೀಗ ಚುನಾವಣಾ ಆಯೋಗದ ನಿರ್ಧಾರಕ್ಕೆ ಸುಪ್ರೀಂ ತಡೆ ನೀಡಿದೆ. ಅನರ್ಹತೆ ಕುರಿತು ತೀರ್ಪು ಬರದೇ ಚುನಾವಣೆ ಆಗಿದ್ದರೆ, ಇಬ್ಬರು ಶಾಸಕರಾಗುವ ಸಂಭವವಿತ್ತು. ಹೀಗಾಗಿ ಸುಪ್ರೀಂ ತೀರ್ಪು ಸ್ವಾಗತಾರ್ಹ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.