ಭಕ್ತರ ವಿಘ್ನ ದೂರ ಮಾಡುವ ಗಣೇಶನಿಗೂ ನೆರೆ ಹಾವಳಿ..
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದಲ್ಲಿ ಗಣೇಶ ಹಬ್ಬಕ್ಕೆ ಮನೆಯಲ್ಲಿ ಇಟ್ಟು ಪೂಜಿಸಲು ಸಿದ್ದಗೊಂಡಿದ್ದ ಮೂರ್ತಿಗಳು ಪ್ರವಾಹಕ್ಕೆ ನಾಶವಾಗಿದ್ದು, ಮೂರ್ತಿ ತಯಾಕರ ಮನೆಯ ಹೊರಗಡೆ ಇಟ್ಟಿದ್ದ ಲಕ್ಷಾಂತರ ರೂ.ಮೌಲ್ಯದ ಗಣೇಶನ ಮೂರ್ತಿಗಳು ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ ಮೂರ್ತಿ ತಯಾರಕರು.