ಅಂತಿಮ ಹಂತಕ್ಕೆ ರಾಜ್ಯದ ಮೊದಲ ಹೆದ್ದಾರಿ ಸುರಂಗ: ಪ್ರವಾಸಿಗರಿಗೂ ಆಕರ್ಷಣೆಯಾಗುವ ನಿರೀಕ್ಷೆ - ಕಾರವಾರ ಚುರುಕಾದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಪ್ರಕ್ರಿಯೆ ಭರದಿಂದ ಸಾಗಿದೆ. ಕೊರೊನಾ ಸಂದರ್ಭದಲ್ಲಿ ಮಂದಗತಿಯಲ್ಲಿ ಸಾಗಿದ್ದ ಕಾಮಗಾರಿ ಇದೀಗ ಚುರುಕುಗೊಂಡಿದ್ದು, ರಾಜ್ಯದ ಮೊದಲ ಹೆದ್ದಾರಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಸಹ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಕರಾವಳಿಯಲ್ಲಿ ಕೇವಲ ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾಣಸಿಗುತ್ತಿದ್ದ ಸುರಂಗ ಸಂಚಾರ ಇದೀಗ ಹೆದ್ದಾರಿ ಸವಾರರಿಗೂ ಲಭ್ಯವಾಗಲಿದ್ದು, ಜೊತೆಗೆ ಪ್ರವಾಸಿಗರ ಆಕರ್ಷಣೆಗೂ ಕಾರಣವಾಗುವ ಲಕ್ಷಣ ಗೋಚರವಾಗಿದೆ.