ನೆರೆ-ಬರದ ಎಫೆಕ್ಟ್: ಕಡಿಮೆಯಾದ ಪೂರೈಕೆ, ಬೇಡಿಕೆ ಹೆಚ್ಚಾಗಿ ಗಗನಕ್ಕೇರಿದ ತರಕಾರಿ ಬೆಲೆ
ಈ ವರ್ಷ ಬರ ಹಾಗೂ ನೆರೆ ಹಾವಳಿಯಿಂದ ರಾಜ್ಯದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮ ದಿನನಿತ್ಯ ಬಳಕೆಯ ತರಕಾರಿಯ ಮೇಲೂ ಬೀರಿದ್ದು, ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇದರಿಂದ ಗೃಹಿಣಿಯರಿಗೆ ಅಡುಗೆ ಮಾಡುವುದು ಹೇಗಪ್ಪಾ ಎಂಬ ಚಿಂತೆ ಶುರುವಾಗಿದೆ.