ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಕೆರೆ ರಸ್ತೆ: ರೋಡ್ ದುರಸ್ತಿಗೆ ಜನರ ಒತ್ತಾಯ - ಅಪಘಾತಕ್ಕೆ ಕಾರಣವಾದ ರಸ್ತೆ
🎬 Watch Now: Feature Video
ರಾಣೆಬೆನ್ನೂರು: ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಚೌಡೇಶ್ವರಿ ಕೆರೆ ಪಕ್ಕದಲ್ಲಿನ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಗ್ರಾಮದ ಹೊರಭಾಗದಲ್ಲಿ ಇರುವ ಕೆರೆ ಪಕ್ಕದಲ್ಲಿ ತುಮ್ಮಿನಕಟ್ಟಿ-ಮೇಡ್ಲೇರಿ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಹಾದು ಹೋಗಿದೆ. ಈ ಮಾರ್ಗದ ಮಧ್ಯೆ ಬರುವ ಚಳಗೇರಿ ಗ್ರಾಮದ ಕೆರೆ ದಂಡೆ ಪಕ್ಕದಲ್ಲಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಅರ್ಧ ರಸ್ತೆ ಇಲ್ಲದಂತಾಗಿದ್ದು, ವಾಹನ ಸವಾರರು ಜೀವ ಭಯದಲ್ಲೇ ವಾಹನ ಚಾಲನೆ ಮಾಡುವಂತಾಗಿದೆ. ಕೆರೆ ಪಕ್ಕದಲ್ಲೇ ತಿರುವು ಇರುವ ಕಾರಣ ಸವಾರರು ಅನೇಕ ಬಾರಿ ಇಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಇಲ್ಲಿನ ಪ್ರಯಾಣಿಕರ ರಾತ್ರಿ ವೇಳೆ ಸವಾರಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಸ್ಯೆ ಇರುವ ಕೆರೆ ರಸ್ತೆಯನ್ನು ಕೂಡಲೇ ದುರಸ್ತಿ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.