ತನ್ನದಲ್ಲದ ತಪ್ಪಿಗೆ ಮಹಿಳೆಯ 'ಮೂಕ'ವೇದನೆ: ರೇಪ್ ಸಂತ್ರಸ್ತೆ ಮಗುವಿಗೆ ಜಿಲ್ಲಾಡಳಿತದಿಂದಲೇ ನಾಮಕರಣ! - ಜಿಲ್ಲಾಡಳಿತದಿಂದಲೇ ಸಂತ್ರಸ್ತೆಯ ಮುದ್ದು ಮಗುವಿಗೆ ನಾಮಕರಣ ಶಾಸ್ತ್ರ
ಅತ್ಯಾಚಾರಕ್ಕೊಳಗಾದ ಮಾತು ಬಾರದ ಮಹಿಳೆಯ ಮುದ್ದು ಕಂದ. ಮೌಢ್ಯತೆ ಹಿನ್ನೆಲೆಯಲ್ಲಿ ಗ್ರಾಮದಿಂದಲೇ ತಾಯಿ, ಮಗು ಬಹಿಷ್ಕಾರಕ್ಕೊಳಗಾಗಿದ್ದರು. ಕಂದ ಹುಟ್ಟಿ ಹಲವು ತಿಂಗಳುಗಳೇ ಕಳೆದಿದ್ದರೂ ನಾಮಕರಣವನ್ನೇ ಮಾಡಿರಲಿಲ್ಲ. ಈಗ ಜಿಲ್ಲೆಯ ಅಧಿಕಾರಿ ವರ್ಗವೇ ನಿಂತು ಮೌಢ್ಯದ ವಿರುದ್ಧ ಪಾಠ ಮಾಡುವ ಮೂಲಕ ಮಗುವಿಗೆ ನಾಮಕರಣ ಶಾಸ್ತ್ರ ನಡೆಸಿ ಅದರ ತಾಯಿಗೆ ಧೈರ್ಯ ತುಂಬಿದೆ.