ಆರತಿ ಬೆಳಗಿದ್ರೆ ಮಳೆ ಬರುತ್ತಾ..! ಉಡುಪಿ ಮಠದಲ್ಲಿ ನಡೆಯಿತಾ ಪವಾಡ? - ಉಡುಪಿ
ಉಡುಪಿಯ ಕೃಷ್ಣ ಮಠ ಪವಾಡವೊಂದಕ್ಕೆ ಸಾಕ್ಷಿಯಾಗಿದೆ. ಪಲಿಮಾರು ಶ್ರೀಗಳು ಭಾಗೀರಥಿ ದೇವತೆಗೆ ಗಂಗಾರತಿ ಬೆಳಗುತ್ತಿದ್ದಂತೆ ಉಡುಪಿಯ ಕೆಲವು ಕಡೆ ಭರ್ಜರಿ ಮಳೆಯಾಗಿದೆ. ಇದು ಕಾಕತಾಳಿಯವೋ ಅಥವಾ ನಂಬಿಕೆಯೋ ಗೊತ್ತಿಲ್ಲ. ಆದ್ರೆ ಇಲ್ಲಿನ ಜನ ಭಾಗೀರಥಿ ದೇವತೆಗೆ ಆರತಿ ಬೆಳಗುತ್ತಿದ್ದಂತೆ ಮಳೆ ಬಂತು ಅಂತಿದ್ದಾರೆ. ಬುಧವಾರ ಗಂಗೆಯ ತಂಗಿ ಭಾಗೀರಥಿಯ ಜನ್ಮ ದಿನವಾಗಿತ್ತು. ಭಗೀರಥ ಮುನಿಯ ಮಹಾತಪಸ್ಸಿಗೆ ಒಲಿದು ಭೂಮಿಗೆ ಇಳಿದವಳು ಭಾಗೀರಥಿ. ಉಡುಪಿಯ ಕೃಷ್ಣಮಠದಲ್ಲೂ ಭಾಗೀರಥಿ ದೇವಿಯ ಸನ್ನಿಧಾನವಿದ್ದು ಇಲ್ಲಿ ಪವಾಡ ನಡೆದಿದೆ ಎನ್ನಲಾಗ್ತಿದೆ.