ಕರ್ನಾಟಕ

karnataka

ETV Bharat / videos

ಶಿವಮೊಗ್ಗ: ಆಹಾರ ಅರಸಿ ಅಯ್ಯಪ್ಪನ ಗುಡಿಗೆ ಬಂದಿದ್ದ ಹೆಬ್ಬಾವು! - Shimoga outskirt of Shimoga

By

Published : Oct 16, 2020, 7:02 AM IST

ಶಿವಮೊಗ್ಗ: ಜಿಲ್ಲೆಯ ಹೊರವಲಯದ ಗಾಡಿಕೊಪ್ಪ ಬಡಾವಣೆಯ ಅಯ್ಯಪ್ಪನ ಗುಡಿ ಆವರಣದಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಇದನ್ನು ಕಂಡ ಜನ ಕೂಡಲೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ಹಾವನ್ನು ಹಿಡಿದು‌ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಶೆಟ್ಟಿಹಳ್ಳಿ‌ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಸುಮಾರು 6.5 ಅಡಿ‌ ಉದ್ದವಿದ್ದ ಹೆಬ್ಬಾವು, ಆಹಾರ ಅರಸಿ ಅಲ್ಲಿಗೆ ಬಂದಿರಬಹುದು ಎನ್ನುತ್ತಾರೆ ಸ್ನೇಕ್ ಕಿರಣ್.

ABOUT THE AUTHOR

...view details