ನಾಗರ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಪೊಲೀಸ್ ಕಾನ್ಸ್ಟೇಬಲ್ - hanagal cobra news
ಹಾನಗಲ್: ತಾಲೂಕಿನ ವರ್ದಿ ಗ್ರಾಮದ ಮನೆಯಲ್ಲಿದ್ದ ನಾಗರ ಹಾವು ಹಿಡಿದು ಪೊಲೀಸ್ ಕಾನ್ಸ್ಟೇಬಲ್ ರಮೇಶ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸತತ ಮೂರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ನಾಗರ ಹಾವು ಮನೆಯವರ ನಿದ್ದೆಗೆಡಿಸಿತ್ತು. ಸ್ಥಳೀಯರು ಪೊಲೀಸ್ ಕಾನ್ಸ್ಟೇಬಲ್ ರಮೇಶ ಅವರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ರಮೇಶ ಹಾವು ಸೆರೆಹಿಡಿದು ಡಬ್ಬಿಯಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಈವರೆಗೆ ರಮೇಶರವರು 500ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರಂತೆ.