ವಿದ್ಯಾಕಾಶಿಯಲ್ಲಿ ಡಸ್ಟ್ ಆರ್ಟ್ ಮೂಲಕ ಗಾನ ಕೋಗಿಲೆಗೆ ನಮನ ಸಲ್ಲಿಸಿದ ಕಲಾವಿದ - ಧಾರವಾಡದಲ್ಲಿ ಡಸ್ಟ್ ಆರ್ಟ್ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ಗೆ ನಮನ ಸಲ್ಲಿಸಿದ ಕಲಾವಿದ
ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆ ಧಾರವಾಡದ ಕಲಾವಿದನೋರ್ವ ವಿಶೇಷವಾಗಿ ಕಲಾ ನಮನ ಸಲ್ಲಿಸಿದ್ದಾರೆ. ಕಾರಿನ ಮೇಲೆ ಬಿದ್ದ ಧೂಳಿನಲ್ಲಿ ಅವರ ಭಾವಚಿತ್ರ ಬಿಡಿಸಿ ನಮನ ಸಲ್ಲಿಸಿದ್ದಾರೆ. ಕೆಲಗೇರಿ ಗಾಯತ್ರಿಪುರ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಲತಾ ಮಂಗೇಶ್ಕರ್ ಅವರ ನಿಧನದ ವಿಷಯ ತಿಳಿದು ಕಾರಿನ ಮೇಲೆ ಬಿದ್ದ ಡಸ್ಟ್‌ನಲ್ಲಿ ಗಾನ ಕೋಗಿಲೆಯ ಭಾವಚಿತ್ರ ಬಿಡಿಸಿ ಡಸ್ಟ್ ಆರ್ಟ್ ಮೂಲಕ ಕಲಾ ನಮನ ಸಲ್ಲಿಸಿದ್ದಾರೆ. ಸುಮಾರು ಒಂದು ಗಂಟೆ ಸಮಯದಲ್ಲಿ ಲತಾಜೀ ಭಾವಚಿತ್ರ ಬಿಡಿಸಿ ಹೂಮಾಲೆ ಹಾಕಿ ಗೌರವ ಸಮರ್ಪಿಸಿದ್ದಾರೆ.