ಓಡೋ ಕುದುರೆಗೂ ಓಡಿಸೋರಿಗೂ ಇಲ್ಲ ಖುಷಿ.. ಓಡುತ್ತಿಲ್ಲ ಟಾಂಗಾ ಗಾಡಿ, ಇವರ ಬದುಕು ಜಟಕಾ ಬಂಡಿ! - ಸಂಕಷ್ಟದಲ್ಲಿ ಟಾಂಗಾ ಮಾಲೀಕರು
ರಾಜ ಮಹಾರಾಜರ ಕಾಲದಲ್ಲಿ ಕುದುರೆ ಸವಾರಿಯ ಜೊತೆ, ಟಾಂಗಾದಲ್ಲಿ ಕುಳಿತು ಸವಾರಿ ಮಾಡುತ್ತಿದ್ರು. ಕಾಲಕ್ರಮೇಣ ತಂತ್ರಜ್ಞಾನ ಬೆಳವಣಿಗೆಯಾಗುತ್ತಿದ್ದಂತೆ ಸಾಂಪ್ರದಾಯಿಕ ಸಂಚಾರ ಮಾರ್ಗ ಬಿಟ್ಟು ಆಧುನಿಕ ಶೈಲಿಯ ಬೈಕ್, ಕಾರು, ಬಸ್ಗಳನ್ನ ಪ್ರಯಾಣಕ್ಕೆ ಅವಲಂಭಿಸಿದರು. ಆದರೆ, ಐತಿಹಾಸಿಕನಗರಿಯಲ್ಲಿ ಇನ್ನೂ ಟಾಂಗಾಗಳಿವೆ. ಆದರೆ...ಅದನ್ನು ನಡೆಸುವವರ ಬದುಕು ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ.