ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಚಾಲಕ; ಹೋಟೆಲ್ ಒಳಗೆ ನುಗ್ಗಿತು ಮಿನಿ ಬಸ್ - bangalore latest news
ಬೆಂಗಳೂರು: ಮಿನಿ ಬಸ್ ಬ್ರೇಕ್ ಫೈಲ್ಯೂರ್ ಆದ ಪರಿಣಾಮ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿ ಹೋಟೆಲ್ ಒಳಗೆ ನುಗ್ಗಿದ ಘಟನೆ ವೈಯಾಲಿಕಾವಲ್ ವಿನಾಯಕ ಸರ್ಕಲ್ನಲ್ಲಿ ನಡೆದಿದೆ. ವೈಯಾಲಿಕಾವಲ್ನಿಂದ ವಿನಾಯಕ ಸರ್ಕಲ್ ಬಳಿ ಬರುತ್ತಿದ್ದ ಮಿನಿ ಬಸ್ವೊಂದರ ಬ್ರೇಕ್ ಕೈ ಕೊಟ್ಟಿದೆ. ಪರಿಣಾಮ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸಿದ್ದರಿಂದ ಬಸ್ ಹೋಟೆಲ್ ಒಳಗೆ ನುಗ್ಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಜನರ ಪೈಕಿ ಮೂವರು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ರಸ್ತೆ ಬದಿ ನಿಂತಿದ್ದ ನಾಲ್ಕು ಬೈಕ್, ಒಂದು ಕಾರು ಜಖಂಗೊಂಡಿದೆ. ಘಟನೆ ಸಂಬಂಧ ಸದಾಶಿವ ನಗರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಚಾಲಕನ ಕಾಲು ಮುರಿದುಕೊಂಡಿದ್ದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.