ವಿದ್ಯುತ್ ತಂತಿ ತಗುಲಿ ಅವಘಡ: ಹೊತ್ತಿ ಉರಿದ ಮೇವಿನ ಲಾರಿ - electrical accident
ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಆವರಿಸಿಕೊಂಡ ಘಟನೆ ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಬಳಿ ಸಂಭವಿಸಿದೆ. ಬೀದರ್ನಿಂದ ಹೈದರಾಬಾದ್ನ ಗೋಶಾಲೆಗೆ ಲಾರಿಯಲ್ಲಿ ಮೇವು ಸಾಗಿಸಲಾಗುತ್ತಿತ್ತು. ಲಾರಿಗಿಂತ ಎತ್ತರವಾಗಿ ಮೇವಿನ ಹುಲ್ಲನ್ನು ತುಂಬಿಸಿದ ಪರಿಣಾಮ ವಿದ್ಯುತ್ ತಂತಿ ತಗುಲಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.