ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ... ಬೋಟ್ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯರ ಒತ್ತಾಯ - raichur latest news
ರಾಯಚೂರು ಜಿಲ್ಲೆಯ ಕೃಷ್ಣ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಾರಾಯಣಪುರ ಜಲಾಶಯದಿಂದ 2,90,975 ಕ್ಯೂಸೆಕ್ ನೀರನ್ನ ಹೊರ ಬಿಟ್ಟಿರೋದ್ರಿಂದ ಜಿಲ್ಲೆಯ ನದಿ ಪಾತ್ರದಲ್ಲಿನ ಹೊಲಗದ್ದೆಗಳಿಗೆ ಹಾನಿಯುಂಟಾಗಿದೆ. ರಾಯಚೂರು ತಾಲೂಕಿನ ಕುರ್ವಕುರ್ದ ನಡುಗಡ್ಡೆ ನಿವಾಸಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದ್ದು, ತಾತ್ಕಾಲಿಕವಾಗಿ ಬೋಟ್ ವ್ಯವಸ್ಥೆ ಮಾಡಿಕೊಂಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಪ್ರತಿನಿಧಿ ಸ್ಥಳದಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ...