ಬೆಳಗಾವಿಯಲ್ಲಿ ರೆಡ್ಡಿ ಭವನ ಉದ್ಘಾಟಿಸಿದ ಕೇಂದ್ರ ಸಚಿವ - The inauguration of Reddy Bhavan built by Reddy society in Belgaum
ಬೆಳಗಾವಿಯ ಸದಾಶಿವ ನಗರದಲ್ಲಿ ರೆಡ್ಡಿ ಸಮಾಜದಿಂದ ನಿರ್ಮಿಸಲಾಗಿರುವ ರೆಡ್ಡಿ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯವನ್ನು ಇಂದು ಉದ್ಘಾಟಿಸಲಾಯಿತು. ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಮುದಾಯ ಭವನ ಉದ್ಘಾಟನೆ ನೆರೆವೇರಿಸಿದರು. ರೆಡ್ಡಿ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಕೆ ಪಾಟೀಲ್, ಎಸ್.ಆರ್ ಪಾಟೀಲ್, ಎನ್. ಶಿವಶಂಕರ್ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಅನಿಲ್ ಬೆನಕೆ ಪಾಲ್ಗೊಂಡಿದ್ದರು. ರೆಡ್ಡಿ ಸಮುದಾಯ ಭವನ ಕಟ್ಟಡಕ್ಕೆ ಧನಸಹಾಯ ಮಾಡಿದ ಹಾಗೂ ರೆಡ್ಡಿ ಸಮುದಾಯದಲ್ಲಿ ಉತ್ತಮ ಹೆಸರು ಸಮಾಜ ಸೇವೆ ಮಾಡುತ್ತಿರುವ ರೆಡ್ಡಿ ಸಮುದಾಯದವರನ್ನು ಇದೇ ವೇಳೆ ಸನ್ಮಾನಿಸಲಾಯಿತು.