ಗಣಿನಗರಿಯಲ್ಲಿ ಗಣೇಶನ ಅದ್ಧೂರಿ ನಿಮಜ್ಜನ: ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದ ಚಿಣ್ಣರು - ಗಣೇಶನ ನಿಮಜ್ಜನ
ಬಳ್ಳಾರಿ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಅದ್ಧೂರಿಯಾಗಿ ನಡೆಯಿತು. ಬುಧವಾರ ಸಂಜೆಹೊತ್ತಿಗೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ ಡಿಜೆ ಸೌಂಡ್ ಸಿಸ್ಟಮ್ಗೆ ಹತ್ತಾರು ಚಿಣ್ಣರು ಕುಣಿದು ಕುಪ್ಪಳಿಸಿದರು. ಕೆಲವೆಡೆ ಟ್ರ್ಯಾಕ್ಟರ್ಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆದರೆ, ಉಳಿದೆಡೆ ಸರಕು ಸಾಗಣೆ ಆಟೋರಿಕ್ಷಾಗಳಲ್ಲಿ ಇಟ್ಟುಕೊಂಡು ಗಣೇಶಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.