ಕರ್ನಾಟಕ

karnataka

ETV Bharat / videos

ಹಾವೇರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ; ಅಲಂಕೃತಗೊಂಡ ಮಣ್ಣಿನ ಎತ್ತುಗಳು - ಮಣ್ಣಿನ ಎತ್ತುಗಳು

By

Published : Jun 20, 2020, 10:23 PM IST

ಹಾವೇರಿ ಜಿಲ್ಲೆಯಾದ್ಯಂತ ಶನಿವಾರ ಮತ್ತು ಭಾನುವಾರದಂದು ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಂಬಾರ ಕುಟುಂಬಗಳು ಮಣ್ಣಿನಿಂದ ತಯಾರಿಸಿದ ಬಸವಣ್ಣನ ಮೂರ್ತಿಗಳ ಮಾರಾಟ ಜೋರಾಗಿದ್ದು, ಹಾವೇರಿಯ ಮಾರುಕಟ್ಟೆಯಲ್ಲಿ ಮಣ್ಣಿನಿಂದ ಮಾಡಿರುವ ಎತ್ತುಗಳ ಮಾರಾಟ ಜೋರಾಗಿದೆ. ಅನ್ನದಾತನ ಬೆನ್ನೆಲುಬಾಗಿರುವ ಎತ್ತುಗಳನ್ನ ಉತ್ತರ ಕರ್ನಾಟಕ ಭಾಗದಲ್ಲಿ ಪೂಜೆ ಮಾಡುವ ಪದ್ದತಿಯಿದ್ದು, ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತದೆ. ಮಣ್ಣಿನಿಂದ ಮಾಡಿದ ಎತ್ತುಗಳು ಬಣ್ಣಗಳಿಂದ ಅಲಂಕೃತಗೊಂಡು ನೋಡುಗರನ್ನು ಸೆಳೆಯುತ್ತಿವೆ.

ABOUT THE AUTHOR

...view details