ಪ್ರವಾಹದ ನೀರಿಗೆ ಸಿಲುಕಿ ಪಾರಾಗಿ ಬಂದ ಆನೆ! - Bandipur National Park
ಮೈಸೂರಿನಲ್ಲಿ ಭಾರಿ ಮಳೆಯ ಹಿನ್ನೆಲೆ ಪ್ರವಾಹದ ನೀರಿಗೆ ಸಿಲುಕಿದ್ದ ಕಾಡಾನೆಯೊಂದು ಬುದ್ಧಿವಂತಿಕೆಯಿಂದ ಹೋರಾಟ ಮಾಡಿ ಅಪಾಯದಿಂದ ಪಾರಾಗಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಮೂಲೆ ಹೊಳೆ ಅರಣ್ಯ ವಲಯದ ಕಾಡಿಂಚಿನ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆನೆ ಕೊನೆಗೂ ತನ್ನ ಪರಾಕ್ರಮದಿಂದ ಮತ್ತು ಹೋರಾಟದ ದಡ ಸೇರಿದೆ. ಬಂಡೀಪುರ ಹಾಗೂ ನಾಗರಹೊಳೆ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕಾಡು ಪ್ರಾಣಿಗಳು ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿವೆ.