ಪರಿಸರಸ್ನೇಹಿ ಗಣೇಶನ ನಿಮಜ್ಜನ : ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪತ್ರಕರ್ತರು - Journalists dissolution of the eco-friendly Ganesh
ಚಿತ್ರದುರ್ಗ ಜಿಲ್ಲಾ ಪತ್ರಕರ್ತರು ಪರಿಸರ ಸ್ನೇಹಿ ಗಣೇಶನನ್ನು ನಿಮಜ್ಜನ ಮಾಡಿದರು. ಪ್ರತಿಷ್ಠಾಪನೆ ಮಾಡಿದ ಮೂರು ದಿನದ ಬಳಿಕ ಗಣೇಶನನ್ನು ನಿಮ್ಮಜನ ಮಾಡಲು ಪತ್ರಕರ್ತರು ಮುಂದಾಗಿದ್ದು, ಈ ವೇಳೆ ಮೆರವಣಿಗೆಯಲ್ಲಿ ವಿವಿಧ ಹಾಡುಗಳಿಗೆ ಪತ್ರಕರ್ತರು ಸಖತ್ ಸ್ಟೆಪ್ ಹಾಕಿದರು. ಒತ್ತಡದ ಕೆಲಸದ ನಡುವೆಯೂ ಪತ್ರಕರ್ತರು ವಾದ್ಯಾ ಹಾಗೂ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.