ದೇವಾಂಗ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ; ಈಸೂರು ಬಸವರಾಜ್ - The Devanga community should be added to the Scheduled Caste
ಶಿವಮೊಗ್ಗ: ಕರ್ನಾಟಕದಲ್ಲಿ ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ದೇವಾಂಗ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಅಖಿಲ ಕರ್ನಾಟಕ ದೇವಾಂಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಈಸೂರು ಬಸವರಾಜ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ದೇವಾಂಗ ಜನಾಂಗದ ಶೇ 99ರಷ್ಟು ಜನರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ, ಹಿಂದುಳಿದಿದ್ದಾರೆ. ರಾಜ್ಯದಲ್ಲಿ ದೇವಾಂಗ ಸಮುದಾಯದ ಮೂವತ್ತು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಆದರೂ ಸಹ ಒಬ್ಬರೇ ಒಬ್ಬರು ವಿಧಾನಪರಿಷತ್ ಸದಸ್ಯರಾಗಲಿ, ವಿಧಾನಸಭಾ ಸದ್ಯರಾಗಲಿ, ಸಚಿವರಾಗಲಿ ಐಪಿಎಸ್, ಐಎಸ್ಎಸ್ ನಂತಹ ಯಾವುದೇ ಉನ್ನತ ಮಟ್ಟದಲ್ಲಿ ಈ ಸಮುದಾಯದ ಜನರು ಇಲ್ಲ. ಈಗಾಗಲೇ 2ಎನಲ್ಲಿರುವ ದೇವಾಂಗ ಸಮುದಾಯವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.