ಗ್ರಾಮಕ್ಕೆ ನುಗ್ಗಿದ ಬೃಹದಾಕಾರದ ಮೊಸಳೆ ಕಂಡು ಬೆಚ್ಚಿಬಿದ್ದ ಜನ! - Latest crocodile In Rayachor
ನದಿಯಲ್ಲಿರಬೇಕಾದ ಮೊಸಳೆ ಊರೊಳಗೆ ನುಗ್ಗಿತ್ತು. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ಈ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಕಕ್ಕಾಬಿಕ್ಕಿಯಾಗಿ ಮನೆ ಸೇರಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ, ಸುಮಾರು 1 ಗಂಟೆ ಕಾರ್ಯಾಚರಣೆ ಮಾಡಿ ಮೊಸಳೆಯನ್ನ ಸೆರೆಹಿಡಿದಿದ್ದಾರೆ. ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.