ವಿಧಿ 370 ರದ್ದು ಮಾಡಿದ್ದು ಸರಿ, ಆದ್ರೆ ನೆಹರೂ ನಿಂದನೆ ತಪ್ಪು: ಮೊಯ್ಲಿ - ಆರ್ಟಿಕಲ್ 370 ರದ್ದು
ವಿಧಿ 370 ವಿಧಿಯನ್ನು ರದ್ದುಪಡಿಸಿ ಕಾಶ್ಮೀರಕ್ಕ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಕೇಂದ್ರದ ನಡೆಯನ್ನು ಸರಿ ಎಂದು ಒಪ್ಪಿಕೊಂಡಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಇದಕ್ಕೆ ನೆಹರೂ ಅವರು ಕಾರಣ ಎಂದು ದೂಷಿಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಟೀಕಿಸಿದ್ದಾರೆ. ವಿಧಿ 370ಅನ್ನು ಆ ಸನ್ನಿವೇಷವನ್ನು ಸರಿದೂಗಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸೇರಿಸಲಾಗಿದೆಯೇ ವಿನಃ ಇನ್ಯಾವ ದುರುದ್ದೇಶಗಳೂ ಇರಲಿಲ್ಲ. ಭವಿಷ್ಯದಲ್ಲಿ ಅದನ್ನು ಸರಿಪಡಿಸುವ ಅಧಿಕಾರ ಸರ್ಕಾರಗಳಿಗಿರುತ್ತದೆ. ಇತಿಹಾಸವನ್ನು ಸರಿಯಾಗಿ ತಿಳಿಯದೆ ನೆಹರೂ ಅವರನ್ನು ಟೀಕಸುವುದು ಸರಿಯಲ್ಲ ಎಂದು ಈಟಿವಿ ಭಾರತ್ಗೆ ಮೊಯ್ಲಿ ತಿಳಿಸಿದ್ದಾರೆ.