ಗಡಿ ಗುರುತು ನಾಶ ಪ್ರಕರಣ: ಇತ್ಯರ್ಥಕ್ಕೆ 2 ತಿಂಗಳ ಗಡುವು ನೀಡಿದ ಕೇಂದ್ರ ಸರ್ಕಾರ - central government gave a two-month deadline boundary mark case News
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತುಮಟಿ ಹಾಗೂ ನೆರೆಯ ಆಂಧ್ರಪ್ರದೇಶದ, ಓಬಳಾಪುರಂ ಗ್ರಾಮಗಳ ನಡುವೆ ಬರುವ ಕರ್ನಾಟಕ ಆಂಧ್ರಪ್ರದೇಶ ವ್ಯಾಪ್ತಿಯಲ್ಲಿನ ಗಡಿ ಗುರುತು ನಾಶ ಪ್ರಕರಣ ಇದೀಗ ಹೊಸದೊಂದು ತಿರುವು ಪಡೆದುಕೊಂಡಿದೆ. ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶದ ರಾಜ್ಯಗಳ ಸರ್ವೇ ಅಧಿಕಾರಿಗಳನ್ನ ಒಳಗೊಂಡ ತಂಡದಿಂದ ಉಭಯ ರಾಜ್ಯಗಳ ಗಡಿಭಾಗವನ್ನ ಗುರುತಿಸಲು ಮುಂದಿನ ಎರಡು ತಿಂಗಳ ಅವಧಿಯ ಗಡುವನ್ನ ಕೇಂದ್ರ ಸರ್ಕಾರ ನೀಡಿದೆ. ಈಗಾಗಲೇ ಒಂದು ಸುತ್ತಿನ ಸರ್ವೇ ಕಾರ್ಯವನ್ನ ಉಭಯ ರಾಜ್ಯದ ಅಧಿಕಾರಿಗಳು ಮಾಡಿದ್ದು. ಇನ್ನೇನು ಸಂಡೂರು ತಾಲೂಕಿನ ತುಮಟಿ ಪ್ರದೇಶ ವ್ಯಾಪ್ತಿಯಲ್ಲಿ ಒತ್ತುವರಿಯಾದ ಗಡಿ ಹಾಗೂ ನಾಶ ಪಡಿಸಿದ ಗಡಿ ಗುರುತನ್ನ ಗುರುತಿಸಲು, ಪಿಎಂ ಮೋದಿ ಕಾರ್ಯಾಲಯವು ಎರಡು ತಿಂಗಳ ಗಡುವನ್ನ ನೀಡಿದೆ. ಇದರಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.