ಉತ್ತಮ ಮಂತ್ರಿಮಂಡಳವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ರಚಿಸಿವೆ : ಎ.ಮಂಜು - ಎ.ಮಂಜು
ರಾಜಭವನದಲ್ಲಿ ನಡೆದ ಸಚಿವ ಸಂಪುಟ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಎ.ಮಂಜು, ಇವತ್ತು ಯಡಿಯೂರಪ್ಪ ಅವರ ಸರ್ಕಾರದ ಸಚಿವ ಸಂಪುಟದ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಗ 17 ಜನರಿಗೆ ಬಿಜೆಪಿ ಸರ್ಕಾರದಲ್ಲಿ ಅವಕಾಶ ನೀಡಿದ್ದಾರೆ. ಉಳಿದವರಿಗೆ 2 ನೇ ಅವಧಿಯಲ್ಲಿ ಅವಕಾಶ ಇದೆ. ಉತ್ತಮ ಮಂತ್ರಿಮಂಡಲವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ರಚಿಸಿದ್ದಾರೆ. ಜನಪರ ಕೆಲಸಗಳನ್ನು ಮಾಡುತ್ತಾರೆಂಬ ನಂಬಿಕೆಯಿದೆ ಎಂದು ಮಾಜಿ ಸಚಿವ ಎ.ಮಂಜು ಸಂತೋಷ ವ್ಯಕ್ತ ಪಡಿಸಿದರು.