ಕಬಿನಿ ಪ್ರದೇಶದಲ್ಲಿ ಕರಿ ಚಿರತೆ ದರ್ಶನ: ಪ್ರವಾಸಿಗರ ದಿಲ್ ಖುಷ್ - The black panther found in Kabini area
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಪ್ರದೇಶದಲ್ಲಿ ಚಿರತೆಯೊಂದು ಕಂಡುಬಂದಿದೆ. ಅರೇ ಇದೇನ್ರಿ ಅಲ್ಲಿ ನೂರಾರು ಚಿರತೆಗಳಿವೆ, ಇದರಲ್ಲೇನು ವಿಶೇಷ ಅಂತಿರಾ?. ಹೌದು, ಖಂಡಿತ ವಿಶೇಷತೆ ಇದೆ. ಅಷ್ಟಕ್ಕೂ ಅಲ್ಲಿ ಪ್ರವಾಸಿಗರಿಗೆ ಕಂಡುಬಂದಿದ್ದು ಕರಿ ಚಿರತೆ. ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರದೇಶದಲ್ಲಿ ಒಂದೇ ಗಂಡು ಕರಿ ಚಿರತೆ ಇದ್ದು, ಆಗಾಗ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತಿ ಹೆಚ್ಚು ಕರಿ ಚಿರತೆಗಳಿವೆ ಎಂದು ಹೇಳಲಾಗ್ತಿದೆ. ಒಟ್ಟಾರೆ ಈ ಕರಿ ಚಿರತೆ ನೋಡಿದ ಪ್ರವಾಸಿಗರು ಖುಷ್ ಆಗಿದ್ದಾರೆ.
Last Updated : Jan 28, 2020, 8:11 PM IST