ಬೆಂಗಳೂರು: ಭಾರೀ ಮಳೆಗೆ ಮೈಸೂರು ರಸ್ತೆಯಲ್ಲಿ ವೃಷಭಾವತಿ ನದಿಯ ತಡೆಗೋಡೆ ಕುಸಿತ
ಬೆಂಗಳೂರು: ಕಳೆದ ಎರಡು ಗಂಟೆಯಿಂದ ಸುರಿಯುತ್ತಿರವ ಭಾರೀ ಮಳೆಗೆ ಮೈಸೂರು ರಸ್ತೆಯಲ್ಲಿರುವ ವೃಷಭಾವತಿ ನದಿಯ ತಡೆಗೋಡೆ ಕುಸಿದಿದೆ. ವೃಷಭಾವತಿ ನದಿಯಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ರಸ್ತೆ ಬದಿ ನಿರ್ಮಿಸಿದ್ದ ತಡೆಗೋಡೆ ಕುಸಿಯುವುದರ ಜೊತೆಗೆ ಮೈಸೂರು ರಸ್ತೆಯು ಕುಸಿತವಾಗಿದೆ. ತಡೆಗೋಡೆ ಕೊಚ್ಚಿ ಹೋದ ಕಾರಣ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ಮಳೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
Last Updated : Jun 25, 2020, 10:20 PM IST