ಸಕ್ಕರೆ ಜಿಲ್ಲೆಗೆ ಆಗಮಿಸಿದ ತೇರಾಪಂತ್ನ 11ನೇ ಜೈನ ಗುರು - ಮಂಡ್ಯಕ್ಕೆ ತೇರಾಪಂತ್ನ 11ನೇ ಜೈನ ಗುರು
ಮಂಡ್ಯ: ದೇಶದಲ್ಲಿ 30 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿರುವ ತೇರಾಪಂತ್ನ 11ನೇ ಜೈನ ಗುರು ಶ್ರೀ ಮಹಾ ಶ್ರಮಣ್ ಜೈನ ಮುನಿಗಳು ಇಂದು ಸಕ್ಕರೆ ಜಿಲ್ಲೆಗೆ ಆಗಮಿಸಿದ್ದಾರೆ. ಜೈನ ಮುನಿಗಳನ್ನು ಜೈನ ಸಂಪ್ರದಾಯದಂತೆ ಭಕ್ತರು, ರಾಜಕೀಯ ಮತ್ತು ಕನ್ನಡಪರ ಸಂಘಟನೆ ಮುಖಂಡರು ಸ್ವಾಗತ ಮಾಡಿದರು. ಉತ್ತರ ಭಾರತದಿಂದ ಪಾದಯಾತ್ರೆ ಆರಂಭ ಮಾಡಿರುವ ಮುನಿಗಳು, ಇಂದು ಮದ್ದೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮುಂಜಾನೆ ಮಂಡ್ಯ ನಗರ ತಲುಪಲಿದ್ದಾರೆ. ಇನ್ನು ಮಂಡ್ಯ ನಗರಕ್ಕೆ ಆಗಮನ ಹಿನ್ನೆಲೆ ಜೈನ ಸಮುದಾಯದ ಮುಖಂಡರು ಕೂಡ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.