'ನನ್ನ ಅಣ್ಣ ಹಿಂದೆಯೂ ಬೆದರಿಕೆ ಕರೆ ಮಾಡಿದ್ದ, ಬುದ್ದಿ ಹೇಳಿದ್ರೂ ಕೇಳಲಿಲ್ಲ' - Mangaluru bomb scare incident: Accused surrenders
ಮಂಗಳೂರು: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪೊಲೀಸರಿಗೆ ಶರಣಾಗಿರುವ ಆರೋಪಿ ಆದಿತ್ಯರಾವ್ ಸಹೋದರ ಅಕ್ಷತ್ ರಾವ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಅಣ್ಣ ಹೌದು, ಈ ಮೊದಲೂ ಸಹ ಬೆದರಿಕೆ ಕರೆ ಮಾಡಿದ್ದ. ಆಗಲೇ ನಾನು, ತಂದೆ ಬುದ್ದಿ ಮಾತು ಹೇಳಿದ್ದರೂ ಮಾತು ಕೇಳಿರಲಿಲ್ಲ. ಆದ್ದರಿಂದ ಆತನನ್ನೂ ದೂರ ಇಟ್ಟಿದ್ದೆವು. ಅಲ್ಲದೆ, ಎರಡು ವರ್ಷಗಳಿಂದ ನಾವು ಆತನನ್ನು ಸಂಪರ್ಕಿಸಲೇ ಇಲ್ಲ. ಅಪರೂಪಕ್ಕೊಮ್ಮೆ ಮನೆಗೆ ಬರುತ್ತಿದ್ದ. ಆದರೆ, ಸಂಬಂಧ ಅಷ್ಟಕಷ್ಟೇ ಎಂದು ಹೇಳಿದ್ದಾರೆ.