ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೈಕೈ ಹಿಡಿದು ಇಬ್ಬರನ್ನು ದಡ ಸೇರಿಸಿದ ಯುವಕರು!
ರಾಯಚೂರು: ಮಳೆ ನೀರಿನಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಯುವಕರು ಕೈಕೈ ಹಿಡಿದುಕೊಂಡು ಇಬ್ಬರನ್ನು ಹರಸಾಹಸಪಟ್ಟು ದಡದಿಂದ ಮತ್ತೊಂದು ದಡಕ್ಕೆ ಸೇರಿಸಿದ ಘಟನೆ ತಾಲೂಕಿನ ಗಧಾರ ಗ್ರಾಮದಲ್ಲಿ ನಡೆದಿದೆ. ಕೆಲಸ ನಿಮಿತ್ತ ಬೇರೆ ಗ್ರಾಮಕ್ಕೆ ತೆರಳಿದ್ದ ನೀಲಕಂಠ ಬಡಿಗೇರ್ ಹಾಗೂ ಲಾರಿ ಚಾಲಕ ಗೋವಿಂದ ಎಂಬುವರು ಉಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಲಾಗದೇ ಅತಂತ್ರ ಸ್ಥಿತಿಯಲ್ಲಿದ್ದರು. ಸಂದರ್ಭ ಅರಿತ ಗಧಾರ ಗ್ರಾಮದ ಯುವಕರು ಒಬ್ಬರಿಗೊಬ್ಬರು ಕೈಕೈ ಹಿಡಿದುಕೊಂಡು ಇಬ್ಬರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದ್ದಾರೆ.
Last Updated : Sep 27, 2020, 7:47 AM IST