ಕೊಪ್ಪಳದಲ್ಲಿ 40 ಗಣೇಶಮೂರ್ತಿಗಳ ನಿಮಜ್ಜನ: ಭಕ್ತರಿಗೆ ಅನ್ನಸಂತರ್ಪಣೆ - 40 ಗಣೇಶಮೂರ್ತಿಗಳು
ಗಣೇಶ ಪ್ರತಿಷ್ಠಾಪನೆಯ ಮೂರನೇ ದಿನಕ್ಕೆ ಸುಮಾರು 40 ಗಣೇಶಮೂರ್ತಿಗಳು ನಿಮಜ್ಜನವಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರ, ಭಾಗ್ಯನಗರ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂದು ಅನ್ನಸಂತರ್ಪಣೆ ನಡೆಯಿತು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮೊದಲ ದಿನ, ಮೂರನೇ ದಿನ, ಐದನೇ ದಿನ, ಒಂಭತ್ತನೇ ದಿನ ಹಾಗೂ 11 ನೇ ದಿನಕ್ಕೆ ಗಣೇಶ ಮೂರ್ತಿ ನಿಮಜ್ಜನ ಮಾಡುವ ಕ್ರಮವಿದೆ. ಅದರಂತೆ ಇಂದು ಕೊಪ್ಪಳ ನಗರದಲ್ಲಿ ಗಣೇಶಮೂರ್ತಿಗಳ ನಿಮಜ್ಜನ ಸಲುವಾಗಿ ಗಣೇಶ ಪ್ರತಿಷ್ಠಾಪನಾ ಮಂಡಳಿಗಳು ಅನ್ನಸಂತರ್ಪಣೆ ಯೋಜಿಸಿದ್ದು, ಗಣೇಶನ ದರ್ಶನ ಪಡೆದು ಜನರು ಪ್ರಸಾದ ಸೇವಿಸಿದರು.