3 ತಿಂಗಳ ಬಳಿಕ ದೇವಾಲಯಗಳಲ್ಲಿ ಪೂಜೆ: ಹಾಲು, ಹೂ- ಹಣ್ಣಿಗಿಲ್ಲ ಅವಕಾಶ - ಬೆಂಗಳೂರಿನಲ್ಲಿ ದೇವಾಲಯಗಳು ಆರಂಭ,
ಪುರಾಣಪ್ರಸಿದ್ಧ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಮುಂಜಾನೆ 6-30 ರಿಂದ ಶಿವನಿಗೆ ವಿಶೇಷ ಅಭಿಷೇಕ, ಪೂಜೆಗಳು ಆರಂಭಗೊಂಡಿವೆ. ಆದ್ರೆ ಭಕ್ತರ ಸಂಖ್ಯೆ ನಿರೀಕ್ಷೆಯಷ್ಟು ಇರಲಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ದೇವಾಲಯಕ್ಕೆ ಬರುತ್ತಿದ್ದಾರೆ. ಅಭಿಷೇಕ ಪ್ರಿಯ ಶಿವದೇವರಿಗಾಗಿ ತಂದ ಹಾಲು, ಮೊಸರು, ಹೂವು, ಬಿಲ್ವಪತ್ರೆಗಳನ್ನು ಸ್ವೀಕರಿಸಲಾಗುತ್ತಿಲ್ಲ. ದೇವಾಲಯದ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.